ನಾನು ನಂಬಿರುವಂತೆ , ಶಿಕ್ಷಣವು ಕೇವಲ ಕ್ಲಾಸ್ ರೂಮಿನ ನಾಲ್ಕು ಗೊಡೆಗೆ ಸೀಮಿತವಾದ್ದುದ್ದಲ್ಲ . ಅದರಲ್ಲೂ ರಾ.ವಿ.ಕಾಲೇಜ್ ಎಂಬ ವಿವಿಧತೆಯ ಜಗತ್ತಿನಲ್ಲಿ ಪ್ರತಿಕ್ಷಣವೂ ಕಲಿಕೆಯೇ !! " ಒಂದು ಅಕ್ಷರಂ ಕಲಿಸಿದಾತಂ ಗುರು " ಎಂಬ ಮಾತಿನಂತೆ ಇಲ್ಲಿ ಕಾಣುವ ನನ್ನ ಪ್ರತಿಯೊಬ್ಬ ಗೆಳೆಯನೂ ಗುರುವೇ !! ಇದು ಕೇವಲ ಅತಿಶಯೋಕ್ತಿಯಲ್ಲ . ಇದು ಸತ್ಸಂಗತಿ . ಇಲ್ಲಿ , ನಾನು ಕಂಡ ಪ್ರತಿಯೊಬ್ಬರೂ ತಮ್ಮದೇ ಕ್ಷೇತ್ರದಲ್ಲಿ ನಿಪುಣರೂ-ಅದ್ವಿತೀಯರೂ ಆಗಿರುತ್ತಾರೆ . ಇಂತಹ ಶ್ರೇಷ್ಠರ ಪೈಕಿ , " ಸಮೀರ್ ಶರೀಫ್ " ಎಂಬ ಭೂಪ ಕಲಶಪ್ರಾಯವಿದ್ದಂತೆ . ಓ , ಯಾರೀತ ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡುತ್ತದೆ ಅಲ್ವಾ ? ಕೇಳಿ ನನ್ನ ಪ್ರೀತಿಯ "ಗಾಡ್-ಫಾದರ್"ನ ಯಶೋಗಾಥೆಯನ್ನು ...
' ಸಮೀರ್ ನ ಮೊದಲ ಹೆಂಡತಿ ಕೋಡಿಂಗ್ ' :
ಹೌದು ... ಈತ ಪ್ರೋಗ್ರಾಮ್ ಗಳನ್ನು ರಚಿಸುವ ಪರಿ , ಪಡುವ ಪರಿಶ್ರಮ , ಅದರಲ್ಲಿ ಕಾಣುವ ಸಾರ್ಥಕತೆ ಎಂತಹವರನ್ನು ನಿಬ್ಬೆರಗಾಗಿಸುತ್ತದೆ. ಈತ "ಜಾವ" ಭಾಷೆಯ ಮೇಲೆ ಸಾಧಿಸಿರುವ ಅಧಿಪತ್ಯವನ್ನು ಮೆಚ್ಚಲೇಬೇಕು . ಇದಕ್ಕೆ ಪೂರಕ ಎಂಬಂತೆ ಕೆಲವಾರು "ಗೇಮ್" ಗಳನ್ನು ತನ್ನ ಸ್ವಂತ-ಜ್ಞಾನದ ಆಧಾರದ ಮೇಲೆ ರಚಿಸಿರುವುದು, ಈತನ ಸೃಜನಶೀಲತೆಗೆ ಸಾಕ್ಷಿ. http://jinkchak.wordpress.com/category/programming/
’ಸಮೀರ್-ಸಾತ್ವಿಕ್’ಜೋಡಿ ಎಂದರೆ ಎಂತಹ ಕೋಡಿಂಗ್ ಸ್ಪರ್ಧೆಗಳಲ್ಲಿಯೂ ಗೆಲ್ಲುವ ನೆಚ್ಚಿನ ಕುದುರೆಗಳಲ್ಲಿ ಒಂದು , ಎಂಬ ಮಾತು ನಮ್ಮ ಇಡೀ ಕಾಲೇಜಿಗೆ ತಿಳಿದಿರುವ ವಿಷಯ !!
ಎಂಬ ಲಗ್ನ-ಪತ್ರಿಕೆಯ (1967) ಹಾಡು , ಇವರನ್ನು ನೋಡಿದಾಗ ನೆನಪಾಗುತ್ತೆ !!
’ ಆಂಗ್ಲ ಭಾಷೇಯೇ ಈತನಿಗೆ ಶರಣಾಗಿದೆ ’ :
"ಆಡು ಮುಟ್ಟದ ಸೊಪ್ಪಿಲ್ಲ .... ಸಮೀರ್ ಓದದ ಗ್ರಂಥವಿಲ್ಲ" - ಈತ ಲೆಕ್ಕವಿಲ್ಲದಷ್ಟು ಆಂಗ್ಲದ ಕಥೆ,ಕವಿತೆ,ಕಾದಂಬರಿಗಳನ್ನು ಓದಿರುತ್ತಾನೆ. ಈತ ತನ್ನ ಲೇಖನಗಳಲ್ಲಿ ಬಳಸುವ ಆಂಗ್ಲ ಪದಗಳನ್ನೂ, ನುಡಿಗಟ್ಟುಗಳನ್ನೂ ಓದಿದ ಮೇಲಂತೂ, ಆಂಗ್ಲ ಭಾಷೆಯೇ ಈತನ ಅಣತಿಯ ಮೇರೆಗೆ ನಾಟ್ಯವಾಡುತ್ತಿದೆಯೇನೋ ಎಂಬಂತೆ ನನಗೆ ಭಾಸವಾಗಿದೆ . ಈತನ ಒಡನಾಟದಿಂದ ನನ್ನ ಆಂಗ್ಲ ಭಾಷೆಯ ಜ್ಞಾನ , ಕೊಂಚ ಮಟ್ಟಿಗಾದರೂ ವೃದ್ಧಿಸಿದೆ ಎಂದರೆ ತಪ್ಪಾಗಲಾರದು . ಆಂಗ್ಲ ಸಿನೆಮಾಗಳನ್ನು ನಾನು ಹೆಚ್ಚಾಗಿ ನೋಡಲು ಕೂಡ ಈತನೇ ನನಗೆ ಸ್ಪೂರ್ತಿ .
’ Jinkchak ನ ಕರ್ತೃ ’ :
Jinkchak :http://jinkchak.wordpress.com/ -ಎಂಬುದು ನಮ್ಮ ಕಾಲೇಜಿನಲ್ಲಿ ಅತಿ ಹೆಚ್ಚು ಪ್ರಚಲಿತವಾದ ಬ್ಲಾಗ್ ಗಳಲ್ಲಿ ಅಗ್ರ-ಪಂಕ್ತಿಯಲ್ಲಿದೆ . ಈ ಬ್ಲಾಗಿನಲ್ಲಿ ಹಾಸ್ಯ ಕಥೆಗಳು , ಕಾಲೇಜಿನಲ್ಲಿ ನಡೆಯುವ ಘಟನೆಗಳ ಹಾಸ್ಯಾತ್ಮಕ ಶೈಲಿಯ ವರ್ಣನೆ , ಪ್ರವಾಸ ಕಥನ , ತಂತ್ರಜ್ಞಾನ ವಿಷಯಗಳು - ಇವೇ ಮೊದಲಾದವುಗಳನ್ನು ನಾವು ನೋಡಬಹುದು . ಸಣ್ಣ ಅಂಕಣದಿಂದ ಶುರುವಾದ ಈ ಬ್ಲಾಗ್ ಈಗ ಹೆಮ್ಮರವಾಗಿ ಬೆಳದಿದೆ . ಇದು ಹೆಚ್ಚೆಚ್ಚು ಪ್ರಚಲಿತವಾದಂತೆ , ಹುಡುಗರು ಇದರಲ್ಲಿ ಯಾವಾಗ ಹೊಸ ಆರ್ಟಿಕಲ್ ಬರುತ್ತದೋ ಎಂದು ಹಪ-ಹಪಿಸುತ್ತಿರುತ್ತಾರೆ. ಇಂತಹ ವೈಶಿಷ್ಟ್ಯ ಪೂರ್ಣ ಬ್ಲಾಗಿನ ಒಡೆಯನೂ ಸಹ ನಮ್ಮ ಕಥಾನಾಯಕನೇ !! ಇಷ್ಟಿದ್ದರೂ ಆತ ತನ್ನ ಹೆಸರಿನಲ್ಲಿ ಅಂಕಣಗಳನ್ನು ಬರೆಯದೆ , " Me ... yeah Me " ಎಂಬ ಮಿಥ್ಯಾನಾಮದಿಂದ ( pseudonym ) ಬರೆಯುವುದು ವಾಢಿಕೆ .
' ಸಮೀರ್ ನ Recursive ನಗು ' :
ಈತನ ನಗುವೇ ಸುಪ್ರಸಿದ್ಧ !! "ಓ ... ಜೋರಾಗಿ ನಗುತ್ತಾನಲ್ಲಾ , ಅವನಾ ? ಗೊತ್ತು ಬಿಡು !! " ಎಂಬ ಮಾತುಗಳನ್ನು ಕೇಳಿದ್ದೇನೆ . ಈತ ನಗದೆ ಇರುವ ಸ್ಥಳಗಳಿಲ್ಲ - ಕ್ಲಾಸ್ ರೂಮ್ ನಿಂದ ಹಿಡಿದು ಕ್ಯಾಂಟೀನ್ ತನಕ ನಗುತ್ತಿರುತ್ತಾನೆ . ಈತ ನಗಲು ದೊಡ್ಡ-ದೊಡ್ಡ ಕಾರಣಗಳು ಬೇಕಿಲ್ಲ . ಆತನೇ ಹೇಳುವ ಹಾಗೇ
"
Once I start laughing , it recursively stimulates me to laugh again and again !! It's very difficult to come out of this chain of recursive laughing calls !!
"
ಈತನ ನಗುವೂ Recursion ಪಾಲಿಸುತ್ತದ್ದಲ್ಲ ಎಂಬುದೇ ಆಶ್ಚರ್ಯಕರ ಸಂಗತಿ . ಒಟ್ಟಿನಲ್ಲಿ ಈತನ ಪ್ರಭಾವದಿಂದ , ಇಡೀ ವಾತಾವರಣವೇ ಹಸನ್ಮುಖಿ ಆದಂತೆ ಗೋಚರಿಸುತ್ತದೆ .
’ ವಿದ್ಯಾ ದಧಾತಿ ವಿನಯಂ ’ :
ಹೆಚ್ಚೆಚ್ಚು ಕಲಿಯುತ್ತಾ ಹೋದಂತೆ , ಅಹಂಕಾರವು ತನ್ನ ಬೇರುಗಳನ್ನು ಬಿಟ್ಟು ಮುಂದೇ ಪೆಂಡಂಭೂತವಾಗಿ ಕಾಡಲಾರಂಭಿಸುತ್ತದೆ . ನಿಜವಾದ ವಿದ್ಯಾವಂತ " ವಿನಯತೆ ಇಲ್ಲದ ವಿದ್ಯೆ , ಹೆಣಕ್ಕೆ ಶೃಂಗಾರ ಮಾಡಿದಂತೆ " ಎಂಬುದನ್ನು ಅರಿತಿರುತ್ತಾನೆ . ನಮ್ಮ ಕಥಾನಾಯಕ ಕೂಡ "ನಿಜವಾದ ವಿದ್ಯಾವಂತ"ರ ಸಾಲಿನಲ್ಲಿ ನಿಂತು "Down to Earth" ಆಗಿರುತ್ತಾನೆ ಮತ್ತು ಈತನ ಸ್ಥಿತಪ್ರಜ್ಞತೆಯನ್ನು ಮೆಚ್ಚಲೇಬೇಕು . ಗೆದ್ದರೂ ಹೆಚ್ಚು ಭಾವೋದ್ರೇಕಗೊಳ್ಳದೇ, ಸೋತರೂ ಹೆಚ್ಚು ದುಃಖಿಸದೇ "Puff !! It's gone !!" ಎಂದು ಹೇಳಿ ಸುಮ್ಮನಾಗುತ್ತಾನೆ . ಇದು ಸಾಧನೆಯ ಪಥದಲ್ಲಿ ಹೆಚ್ಚು-ಹೆಚ್ಚು ಕ್ರಮಿಸಿರುವವರಲ್ಲಿ ಮಾತ್ರ ಕಾಣಬಹುದು !! .
- ಒಟ್ಟಿನಲ್ಲಿ , ನಾನು ಕಂಡ ಬಹುಮುಖ ಪ್ರತಿಭೆ ಉಳ್ಳ ವ್ಯಕ್ತಿಗಳಲ್ಲಿ ಈತನೂ ಒಬ್ಬ . ಜೀವನಕ್ಕೆ ಬೇಕಾದ ಹಲವಾರು ಮೌಲ್ಯಗಳನ್ನು ಈತನಿಂದ ನಾನು ಕಲಿತ್ತಿದ್ದೇನೆ - ಮುಂದೆಯೂ ಕಲಿಯುತ್ತಿರುತ್ತೇನೆ .
ಸನ್ಮಾನ್ಯಡಿ.ವಿ.ಜಿಅವರು ಹೇಳಿರುವಂತೆ , "ಬದುಕು ಜಟಕಾಬಂಡಿ" ಇದ್ದ ಹಾಗೆ. ಈ ಜಟಕಾಬಂಡಿಯನ್ನು ಸಾಗಿಸುವಾಗ ( ಜೀವನದಲ್ಲಿ ) ನಾವು ತರಹ-ವಿಚಿತ್ರ ಜನರನ್ನು ಕಾಣುತ್ತೇವೆ . ಕೆಲವರನ್ನು ಸಹಜವಾಗಿ ಕಾಲಕ್ರಮೇಣ ಮರೆಯುತ್ತೇವೆ . ಇನ್ನೂ ಕೆಲವರು ತಮ್ಮ ವಿಶೇಷ ನಡತೆಗಳಿಂದ-ಜೀವನ ಶೈಲಿಗಳಿಂದ ಮರೆಯಲು ಅಸಾಧ್ಯರಾಗುತ್ತಾರೆ . ನಮ್ಮ ಕಥಾನಾಯಕ ನಿಸ್ಸಂದೇಹವಾಗಿ ಎರಡನೆಯ ಗುಂಪಿಗೆ ಸೇರಿದವನು .
ಸಮೀರ್ ಮತ್ತು ನನ್ನ ನಡುವೆ ಹಲವಾರು ವಿಷಯಗಳಲ್ಲಿ ವಿಭಿನ್ನತೆ ಇದ್ದರೂ , "ಗೆಳೆತನ" ಎಂಬ ಸೂರಿನಡಿ ನಾವೆಲ್ಲರೂ ಆಶ್ರಯ ಪಡೆದವರೇ !! ಪರಸ್ಪರ ಸೌಹಾರ್ದತೆಯಿಂದ ಸ್ನೇಹದ ಕಡಲಲ್ಲಿ ಪಯಣಿಗರಾಗಿ ಸಾಗುತ್ತಿದ್ದೇವೆ ... ಮುಂದೆಯೂ ಸಾಗುತ್ತಿರುತ್ತೇವೆ ಎಂಬ ಭರವಸೆ ನನಗಿದೆ .
ಉಪಸಂಹಾರ : ಗೆಳೆಯ ಸಮೀರ್ ನ ೨೦ನೇ ಜನುಮ ದಿನದಂದು ಏನಾದರು ಕೊಡಬೇಕೆಂದನಿಸಿತು . ಗೆಳೆಯನ ಮನೆಗೆ ನುಗ್ಗಿ ಕೇಕ್ ಕತ್ತರಿಸಿ ಮುಖಕ್ಕೆ ಕ್ರೀಮ್ ಬಳಿಯುವುದು , ಮುಖ ಪುಸ್ತಕದಲ್ಲಿ " Had an awesome day with chinnu ... Love ya ... Mwah ... !! Munnu you missed it !! " ಎಂದೆಲ್ಲಾ ಬರೆಯುವುದು - ಇಂತಹ ಒಳ್ಳೇ ಅಭ್ಯಾಸ ಯಾವುದೂ ನನಗೆ ತಿಳಿದಿಲ್ಲ . ಸರಿ , ಏನು ಮಾಡೋದು ಎಂದು ಆಲೊಚಿಸುತ್ತಾ ... ಮೈಕೊರೆಯುವ ಚಳಿಯಲ್ಲಿ ಬಿಸಿ-ಬಿಸಿ ಕಾಫಿ ಹೀರುತಲಿದ್ದೆ . ಆಗ , ಗೆಳೆಯನ ಬಗ್ಗೆ ಒಂದು ಕಿರು ಅಂಕಣವನ್ನು ಬರೆದು , ಆತನ ಜನುಮದಿನದ ನೆನಪಿನ ಕಾಣಿಕೆಯಾಗಿ ಯಾಕೆ ನೀಡಬಾರದು ಎಂಬ ಯೊಚನೆ ಥಟ್ ಅಂತ ಹೊಳೆಯಿತು. ಕಾಫಿ ಕೊಟ್ಟ ಐಡಿಯಾ ಗೆ ವಂದಿಸಿ ಮಿತ್ರನ ಬಗ್ಗೆ ನನಗೆ ತೋಚಿದ್ದನ್ನು ಗೀಚಲು ಶುರುಮಾಡಿದೆ .....
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ !! ನಿನ್ನ ಆಸೆ-ಆಕಾಂಕ್ಷೆಗಳು ಈಡೇರಿ , ಈ ಪೈಪೋಟಿಯ ಬದುಕಿನ ಮಜಲುಗಳನ್ನು ಯಶಸ್ವಿಯಾಗಿ ದಾಟುತ್ತಾ , ನೆಮ್ಮದಿ ಕಾಣುತ್ತಾ , ಇನ್ನೂ ನೂರಾರು ವಸಂತಗಳನ್ನು ಕಾಣುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ....
ರಜೇಗೆಂದು ಹೈದರಾಬಾದ್ ಗೆ ಹೋಗಿದ್ದ ಗುಂಡ, ಬೆಂಗಳೂರಿಗೆ ಹೊರಡುವ ರಾತ್ರಿಯ ರೈಲನ್ನು ಹತ್ತಿದ . ಗುಂಡ ವಿಶ್ಲೇಷಣಾ ಮನೊಭಾವ ಉಳ್ಳವನಾದ್ದರಿಂದ , ಆತ ರೈಲಿನಲ್ಲಿ ವಿವಿಧ ಸಹ ಪ್ರಯಾಣಿಕರನ್ನು ಗಮನಿಸುತ್ತ ಅವರ ಹಾವ-ಭಾವ-ಚಹರೆಯನ್ನು ದೃಷ್ಟಿಸುತ್ತ ಮನಸ್ಸಿನಲ್ಲಿಯೇ ಅವರ ಬಗ್ಗೆ ಲೆಕ್ಕಾಚಾರ ಹಾಕ ತೊಡಗಿದ . ಅಷ್ಟರಲ್ಲಿ ಗುಂಡನ ಸಂಚಾರ ದೂರವಾಣಿಗೆ ಬಂದ ಒಂದು ಕಿರು ಸಂದೇಶ ಹೀಗಿತ್ತು " Wish You Happy Janmashtami In Advance ". ತಕ್ಷಣವೇ ಯಾರು ಕಳುಹಿಸಿದರು ಎಂಬುದನ್ನೂ ನೋಡದೇ ಗುಂಡ ಸಾರಾಸಗಟಾಗಿ ಬಂದ ನಂಬರಿಗೆ "Thank You .... Wish You The Same... " ಎಂಬ ಸಂದೇಶವನ್ನು ಕಳುಹಿಸಿಬಿಟ್ಟ . ಆದರೆ ಗುಂಡ ಕಳುಹಿಸಿದ ಮೆಸೇಜ್ ಪ್ರೀತಿ-ವಿಶ್ವಾಸದ ದ್ಯೋತಕವಾಗಿರಲಿಲ್ಲ, ಬದಲಿಗೆ " ರಿಪ್ಲೈ ಮಾಡಬೇಕಲ್ವ ?" ಎಂಬ ಶಾಸ್ತ್ರವನ್ನು ಬಲವಂತವಾಗಿ ಪಾಲಿಸುವುದರ ಪ್ರತೀಕವಾಗಿತ್ತು .
ಹೀಗೆ ಪ್ರಯಾಣ ಸಾಗುತಿತ್ತು . ಗುಂಡ ರೈಲಿನಲ್ಲಿ ಊಟ ಮುಗಿಸಿ ಮಲಗುವ ತಯಾರಿ ನಡೆಸಿದ . ಅಷ್ಟರಲ್ಲಿ ಗುಂಡನ ದೂರವಾಣಿಗೆ ತನ್ನ ತಾಯಿಯಿಂದ ಒಂದು ಕರೆ ...
ತಾಯಿ-ಊಟ ಆಯ್ತ ? ಟ್ರೈನ್ ಎಲ್ಲಿದೆ ?
ಗುಂಡ- ಆಯಿತು .... ಟ್ರೈನ್ ಹೈದರಾಬಾದ್ ಬಿಟ್ಟು ಮುಕ್ಕಾಲು ಗಂಟೆ ಆಯಿತು ....
ತಾಯಿ - ಸರಿ , ನಾಳೆ ಗೋಕುಲಾಷ್ಟಮಿ !! ಮರೀಬೇಡ .... ಬೆಳಿಗ್ಗೆ ರೈಲ್ವೇ ಸ್ಟೇಷನ್ ನಿಂದ ಸೀದ ಮನೆಗೆ ಬಂದು ಸ್ನಾನ-ಸಂಧ್ಯಾವಂದನೆ ಮುಗಿಸಿ ... ಮನೆ ಮುಂದೆ ಮತ್ತು ದೇವರ ಮನೆಗೆ ಮಾವಿನ ಎಲೆ ಕಟ್ಟಬೇಕು .
ಗುಂಡ- ಸರಿ ಮಾ .... ನಾಳೆ ಊಟಕ್ಕೆ ಏನು ಸ್ಪೆಷಲ್ಲು ?
ತಾಯಿ - ಮನೆಗೆ ಬಾ ... ಆಮೇಲೆ ಹೇಳ್ತೀನಿ . ಟ್ರೈನ್ ನಲ್ಲಿ ಪರ್ಸ್ ಹುಷಾರು ..... ಮಲಗಬೇಕಾದರೆ ಲಗ್ಗೆಜ್ ಅನ್ನು ಪಕ್ಕದಲ್ಲೇ ಇಟ್ಟುಕೋ ..... ಗುಡ್ ನೈಟ್ ...
ಗುಂಡ - ಅಯ್ಯೋ .... ಚಿಕ್ಕ ಮಕ್ಕಳಿಗೆ ಹೇಳುವ ತರಹ ಹೇಳುತ್ತಿದ್ದೀರಲ್ಲ ಮಾ ... Now I am "grown up" !! ಗುಡ್ ನೈಟ್ ...
ಸೊಳ್ಳೆ-ತಿಗಣೆಗಳ ಕಾಟವೋ ಅಥವಾ ಗೊಕುಲಾಷ್ಟಮಿಯನ್ನು ನೆನಪಿಸಿದ ಅಮ್ಮನ ಕರೆಯೋ ಗೊತ್ತಿಲ್ಲ - ಗುಂಡನಿಗೆ ನಿದ್ರಾ ದೇವಿ ಒಲಿಯಲಿಲ್ಲ , ಬದಲಿಗೆ ಗುಂಡ ಯೊಚನಾ ಲಹರಿಯಲ್ಲಿ ತೇಲಿ ಹೋದ.... ತನ್ನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿದ್ದ , ೧೦-೧೫ ವರ್ಷಗಳ ಹಿಂದಿನ ಕೃಷ್ಣ ಜನ್ಮಾಷ್ಟಮಿಯ ದಿನಗಳನ್ನು ನೆನಪಿಸಿಕೊಂದ .
ಆಗಿನ ಕೃಷ್ಣ ಜನ್ಮಾಷ್ಟಮಿಯ ದಿನಗಳಲ್ಲಿ ಗುಂಡ ಐಯ್ಯಂಗಾರಿಯ ಮನೆಯಲ್ಲಿ ಸಂಭ್ರಮವೋ-ಸಂಭ್ರಮ. ಹತ್ತಿರದ ದೂರದ ನೆಂಟರಿಷ್ಟರೂ ಸೇರಿದಂತೆ, ಹಲವಾರು ಮಂದಿ ಸಂಬಂಧಿಕರು ಗುಂಡನ ತಾತನ ಮನೆಯಲ್ಲಿ ಸೇರಿರುತ್ತಿದ್ದರು . ಗುಂಡ ತನ್ನ ಅಕ್ಕಂದಿರೊಡನೆ, ಅಣ್ಣ-ತಮ್ಮಂದಿರೊಡನೆ ಹಬ್ಬದ ತಯಾರಿಯಲ್ಲಿ ತೊಡಗಿಸಿಕೊಳ್ಳೂತಿದ್ದ ಪರಿಯನ್ನು , ಇನ್ನೂ ಆತ ಮರೆತಿಲ್ಲ . ಶಾಲೆಗೆ ಚಕ್ಕರ್ ಹೊಡೆದು ( ರಜೇ ಕೊಡದೇ ಹೋದ ಸಂದರ್ಭದಲ್ಲಿ ) ಮನೆಯಲ್ಲಿ ಪಸರಿಸಿರುವ ಸಡಗರದ ವಾತಾವರಣಕ್ಕೆ ಸಾಕ್ಷಿಯಾಗಿರುತ್ತಿದ್ದ . ಎಂದಿನಂತೆ, ಅವತ್ತಿನ ದಿನವೂ ಅವನ ಅಜ್ಜಿಯೇ ಸ್ನಾನಾದಿ ಇತರೇ ನಿತ್ಯ ಕರ್ಮಗಳನ್ನು ಬೇಗ ಮುಗಿಸಿ ದೇವರಿಗೆ " ಶಿಟ್ರಮ್ ,ಶಿರುಗಾಲೈ ವಂದು ಉನ್ನೈ ಚೇವಿತ್ತು" ( ತಿರುಪ್ಪಾವೈ - ೨೯) ಎಂದು ಹಾಡಿ-ಹೊಗಳಿ ,ತಾತ ಮಾಡುವ ದೇವರ ಆರಾಧನೆಯ ಸಿದ್ಧತೆಯಲ್ಲಿ ಸಹಾಯ ಮಾಡುತ್ತಿದ್ದರು. ಅದೇ ಸಮಯಕ್ಕೆ ಮನೆಯ ಹೊರಾಂಗಣದಲ್ಲಿ ಮನೆಯ ಹೆಂಗಸರು ಬಣ್ಣ-ಬಣ್ಣದ ರಂಗವಲ್ಲಿಯನ್ನು ಅದ್ಭುತವಾಗಿಟ್ಟು ,ನೆರೆ-ಹೊರೆಯವರು ನಿಬ್ಬೆರಗಾಗುವಂತೆ ಮಾಡುತ್ತಿದ್ದರು .ಅಷ್ಟು ಹೊತ್ತಿಗೆ ತಾತನವರು ಸ್ನಾನ ಮುಗಿಸಿ ,ಹಣೆಯ ಮೇಲೆ "ಮೂರು ನಾಮವನ್ನು" ನಿಧಾನವಾಗಿ-ಜಾಣ್ಮೆಯಿಂದ ಇಟ್ಟುಕೊಳ್ಳುತ್ತಿದ್ದ ರೀತಿ ,ಗುಂಡನಿಗೆ ಆಶ್ಚರ್ಯದ ನಗು ತರಿಸುತ್ತಿತ್ತು . ಗುಂಡ ಮುಂತಾದ ಹುಡುಗರು ತಮ್ಮ ಸ್ನಾನಾದಿ ಕರ್ಮಗಳನ್ನು ಮುಗಿಸಿ ಸ್ಪರ್ಧಾತ್ಮಕವಾಗಿ ಮನೆಯ ಮುಂದೆ , ದೇವರ ಮನೆಗೆ ಹಚ್ಚ ಹಸಿರು ಮಾವಿನ ಎಲೆಗಳನ್ನು ಬೇಗ-ಬೇಗ ಕಟ್ಟಿ,ತಂದೆ-ತಾಯಿಯವರಲ್ಲಿ "ಭೇಷ್" ಎನಿಸಿಕೊಳ್ಳುವುದು ಅವರಿಗೆ ಅತಿ ಮುಖ್ಯವಾಗಿತ್ತು. ಅಷ್ಟರಲ್ಲಿ ಗುಂಡನ ತಾತನವರ ಆರಾಧನೆಯೂ ಮುಗಿದಿರುತ್ತಿತ್ತು .
ತಿಂಡಿಯ ನಂತರ ಕೃಷ್ಣನ ಮಂಟಪ ಕಟ್ಟುವುದಕ್ಕೆ ಸರ್ವರೂ ಸಂತೋಷದಿಂದ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಮಂಟಪಕ್ಕೆ ,ಅಡುಗೆಗೆ ಬೆಕಾದ ಸಾಮಾನುಗಳನ್ನೂ ಮತ್ತು ಅವರಿಗೆ ಬೇಕಾದ ಇನ್ನಿತರ ಪದಾರ್ಥಗಳನ್ನೂ ಎಂದಿನಂತೆ (ಅಂದು-ಇಂದು-ಎಂದೆಂದು) "ಮಲ್ಲೇಶ್ವರಂ" ಒದಗಿಸುತ್ತಿತ್ತು .
ಕೆಲವು ಹಿರಿಯರ ಮುಂದಾಳತ್ವದಲ್ಲಿ, ಗುಂಡನೂ ಸೇರಿದಂತೆ ಹಲವಾರು ಪುಟಾಣಿ ಮಕ್ಕಳು ಚಾಕಚಕ್ಯತೆಯಿಂದ ಮಂಟಪದಲ್ಲಿ ಇಟ್ಟಿರುವ ಕೃಷ್ಣನ ವಿಗ್ರದ ಸುತ್ತಲೂ ಚಕ್ಕುಲಿ,ಮುಚ್ಚೇರು,ತೇಂಗೋಳ್,ರವೆ ಉಂಡೆ,ಪೊರಿ ಉಂಡೆ,ಕೊಬ್ಬರಿ ಮಿಟಾಯಿ ಮುಂತಾದ ತಿಂಡಿ ತಿನಸುಗಳನ್ನೂ ವಿವಿಧ ಹಣ್ಣುಗಳನ್ನೂ ದಾರದ ಸಹಾಯದಿಂದ ಕಟ್ಟುತ್ತಿದ್ದರು .ನಂತರ ಗುಂಡನ ತಂದೆಯವರು ಮಂಟಪವನ್ನು ಸಣ್ಣ ವಿದ್ಯುತ್ ಬಲ್ಬು ಗಳಿಂದ ಅಲಂಕರಿಸಲು-ಅದು ಮಂಟಪದ ಮೆರಗನ್ನು ಇಮ್ಮಡಿಗೊಳಿಸುತ್ತಿತ್ತು.ವಿದ್ಯುತ್ತಿನ ಸಹಾಯದಿಂದ, ಆ ಕೃಷ್ಣ ಮಂಟಪವು ಎಲ್ಲರನ್ನು ಮಂತ್ರ ಮುಗ್ದರನ್ನಾಗಿಸುತ್ತಿತ್ತು. ಒಟ್ಟಿನಲ್ಲಿ ಆ ನಿರ್ಜೀವ ವಿಗ್ರಹಕ್ಕೆ " ಜೀವ ಬಂದಿದಿಯೆನೋ " ಎಂಬಂತೆ ಗೋಚರಿಸುತ್ತಿತ್ತು .ಇದನೆಲ್ಲಾ ಕಂಡ ಗುಂಡ ಮುಂತಾದ ಮಕ್ಕಳಿಗೆ ಎಲ್ಲಿಲ್ಲಿದ ಉತ್ಸಾಹ-ಆನಂದ .ನಂತರ ಮನೆಯ ಹಿರಿಯರು ಮಂಟಪದ ಆ "ಜೀವಂತ ಕೃಷ್ಣ"ನಿಗೆ ಪೂಜಾ ವಿಧಿ-ವಿಧಾನಗಳನ್ನು ಮುಗಿಸಿ,ಹೆಂಗಸರು ಕೃಷ್ಣನ ಸ್ತೊತ್ರಾವಳಿಗಳನ್ನೂ, ಕೃಷ್ಣನ ಹಾಡುಗಳನ್ನೂ ಹಾಡಿ, ರಾತ್ರಿಯ ಊಟಕ್ಕೆ ಆಣಿಗೊಳಿಸುತ್ತಿದ್ದರು .
ಗುಂಡಯ್ಯಂಗಾರಿಯ ಮನೆಯಲ್ಲಿ ಗೋಕುಲಾಷ್ಟಮಿಯ ರಾತ್ರಿಯ ಭೋಜನ ಬಲು ಜೋರಾಗಿರುತ್ತಿತ್ತು. ಸುಮಾರು ೧೫ ಮಂದಿ ನೆಂಟರು ಒಟ್ಟಾಗಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು . ಪುರೋಹಿತರ ಮನೆಯ ಮಗಳಾಗಿದ್ದ ಗುಂಡನ ಅಜ್ಜಿಯ ನೇತೃತ್ವದಲ್ಲಿ , ಮಡಿಯಿಂದ ಕೃಷ್ಣನಿಗೆ ಸಮರ್ಪಿತವಾಗಿದ್ದ ಎಲ್ಲ ಭಕ್ಷ್ಯ-ಭೋಜನಗಳು ಎಲೆಯ ಮೇಲೆ ಒಂದೊಂದಾಗಿ ಕಾಣಿಸಲಾರಂಭಿಸುತ್ತಿದ್ದವು . ಊಟದ ಮಧ್ಯೆ ತರಹ-ವಿಚಿತ್ರ ಚರ್ಚೆ . ಮಕ್ಕಳ ನಡುವೆ ನಡೆಯುತ್ತಿದ್ದ ವಾದದ ಬಿರುಸು ಹೆಚ್ಚಾದಾಗ ಕಾಣುತ್ತಿದ್ದ " ಪೋಡಾಡೈ ... !!" , " ಅಯ್ಯೋ ಪೋಡಿ ... " ಎಂಬ ಕೋಪದ ಮಾತುಗಳು . ಆಗ ದೊಡ್ಡವರು ಸಮಾಧಾನ ಪಡಿಸುತ್ತಿದ್ದ ರೀತಿ ಯಾವುದನ್ನೂ ಗುಂಡ ಮರೆತಿಲ್ಲ . ಹೀಗೆ ಕೊಳಕಟ್ಟೇ ( ಕನ್ನಡಲ್ಲಿ ಮೋದಕ ಅಂತ ಕೆಲವರು ಕರೆಯುತ್ತಾರೆ .... ಎಷ್ಟು ಸರಿಯೋ ನನಗೆ ಗೊತ್ತಿಲ್ಲ ),ಪಾಯಸ,ಅಪ್ಪಮ್ ಮುಂತಾದ ಸಿಹಿ ಪದಾರ್ಥಗಳನ್ನೊಳಗೊಂಡ ಊಟದ ಕಡೆಯ ಹಂತಕ್ಕೆ , ಅಂದರೇ ಅನ್ನ-ಮೊಸರು ಬಡಿಸುವ ಮೊದಲೇ ಹಲವಾರು ಮಂದಿ "Bold" ಆಗಿರುತ್ತಿದ್ದರು . ಒಮ್ಮೆ ಹೀಗೆ, ಗುಂಡ ಊಟ ಹೆಚ್ಚಾಗಿ ಮಧ್ಯೆ ಎದ್ದು ಹೋಗುವ ಪ್ರಯತ್ನ ಮಾಡಿದಾಗ .... ಗುಂಡನ ಮಾವನವರು ( ಗುಂಡನ ತಾತನವರ ಕಡೆಗೆ ಕೈ ತೋರಿಸುತ್ತ ) " ದೊಡ್ಡವರು ಊಟ ಮುಗಿಸಿ ಏಳುವವರೆಗೂ ,ಚಿಕ್ಕವರಾದ ನಾವು ಏಳುವಂತಿಲ್ಲ !! ತಿಳಿಯಿತೇ ? " ಎಂದು ಹೇಳಿರುವ ಬುದ್ಧಿಮಾತನ್ನೂ ಗುಂಡ ಮರೆತಿರುವುದಕ್ಕೆ ಸಾಧ್ಯವಿಲ್ಲ . ಊಟದ ನಂತರ ಹಿರಿಯರು ಎಲೆ-ಅಡಿಕೆ ಹಾಕಿ ,ಸಂಪ್ರದಾಯದ ಮಾತುಗಳನ್ನು ಆಡಿ, ಮಂಟಪದ ಕೃಷ್ಣನಿಗೆ ಪುನಃ ವಂದಿಸಿ ,ಪರಸ್ಪರ ಬೀಳ್ಕೊಡುತ್ತಿದ್ದರು . ಹೀಗೆ , ಗುಂಡನ ಮನೆಯ ಪ್ರತಿಯೊಬ್ಬರು " ಮುಂದಿನ ಜನ್ಮಾಷ್ಟಮಿ ಯಾವಾಗ ಬರುತ್ತದೋ ?" ಎಂದು ಕಾತುರದಿಂದ ಕಾಯುವಂತೆ ಮಾಡುತ್ತಿತ್ತು ಅಂದಿನ ಜನ್ಮಾಷ್ಟಮಿ. ಇದಕೆಲ್ಲಾ ಅಂದು ಸುರಿಯುತ್ತಿದ "ರೋಹಿಣಿ ಮಳೆ"ಯೇ ಸಾಕ್ಷಿಯಾಗಿರುತ್ತಿತ್ತು .( ಕೃಷ್ಣ ಹುಟ್ಟಿದ್ದು ರೋಹಿಣಿ ನಕ್ಷತ್ರದಂದು ಎಂಬುದು ಜನರಲ್ಲಿರುವ ಒಂದು ನಂಬಿಕೆ )
ಹೀಗೆ ರೈಲಿನಲ್ಲಿ ಯೋಚಿಸುತ್ತಾ ಗುಂಡ ನಿದ್ರಾಪರವಶನಾದ .ಬೆಳಿಗ್ಗೆ ರೈಲು ಬೆಂಗಳೂರಿಗೆ ಬಂದ ತಕ್ಷಣ ಅಮ್ಮನ ಆಣತಿಯಂತೆ ಸೀದಾ ಮನೆಗೆ ಬಂದ. ಸ್ನಾನಾದಿ ಕರ್ಮಗಳನ್ನು ಮುಗಿಸಿ ಮನೆಯ ಬಾಗಿಲಿಗೆ ಮತ್ತು ದೇವರ ಕೋಣೆಯ ಬಾಗಿಲಿಗೆ ಮಾವಿನ ಎಲೆಗಳನ್ನು "ತಾಯಿಯ ಬಲವಂತದ ಮೇರೆಗೆ" ಕಟ್ಟುತ್ತಾ ,ಹಿಂದಿನ ರಾತ್ರಿ ರೈಲಿನಲ್ಲಿ ಯೋಚಿಸಿದ್ದ ೧೦-೧೫ ವರ್ಷದ ಹಿಂದಿನ ಜನ್ಮಾಷ್ಟಮಿ ಹಬ್ಬದ ಸಡಗರವನ್ನು ಪುನಃ ನೆನಪಿಸಿಕೊಂಡು ಆಗಿರುವ ಬದಲಾವಣೆಗಳನ್ನು ಗಮನಿಸಿದ .
ಅಂದೂ ಹಿರಿಯರು ಲವಲವಿಕೆ ಇಂದ ಇರುತ್ತಿದ್ದರು. ಇಂದೂ ಕೂಡ ಗುಂಡನ ಅಜ್ಜಿ "ಎಂದೈ ತಂದೈ ತಂದೈ ,ತಂದೈ ತಮ್ಮೂತ್ತಪ್ಪನ್ ,ಏಳ್ಪಡಿಗಾಲ್ ತೊಡಂಗಿ ವಂದು ವಳಿವಳಿಯಾಯಿ ಚೇಹಿನ್ರೋಮ್ " ( ತಿರುಪಲ್ಲಾಂಡು - ೬) ಎಂಬ ಮಾತಿನಲ್ಲಿ ಅಡಗಿರುವ ಭಕ್ತಿಯಂತೆ ಈಗಲೂ ಕೃಷ್ಣನಿಗೆ ಮಡಿಯಿಂದ ಭಕ್ಶ್ಯ-ಭೋಜನಗಳನ್ನು ಸಿದ್ಧಪಡಿಸುತ್ತಿದ್ದಾರೆ . ಗುಂಡನ ತಾತ ಈ ಇಳಿ ವಯಸ್ಸಿನಲ್ಲೂ ಪೂಜೆ ಸಲಿಸುತ್ತಿದ್ದಾರೆ. ಆದರೆ, ಅಂದು ಇದ್ದ ಸಂಭ್ರಮದ ವಾತಾವರಣ ಇಂದು ಏಕೋ ಗುಂಡನಿಗೆ ಕಾಣುತ್ತಿಲ್ಲವಂತೆ . ಗುಂಡನ ಅಣ್ಣ-ಅಕ್ಕಂದಿರಿಗೆ ಅವರದೇ ಸಂಸಾರದ ತಾಪತ್ರಯಗಳು,ಆಫೀಸಿನ ಅಡಚಣೆಗಳು - ಇವೇ ಮುಂತಾಂದವುಗಳು ದೊಡ್ಡ ಕೆಲಸವೆಂದು ಪರಿಣಮಿಸಿರುವಾಗ , ಇನ್ನು ಕೃಷ್ಣ ಜನ್ಮಾಷ್ಟಮಿಯ ದಿನ ಅವರಿಗೆ ಒಂದು ದಿನ ರಜೇ ಬೇಕೆ ಹೊರತು , ಗುಂಡನ ಮನೆಯಲ್ಲಿ ಸೇರಿ "ಕೃಷ್ಣ ಮಂಟಪ"ವನ್ನು ಕಟ್ಟಿ,ಭೋಜನದಲ್ಲಿ ಪಾಲ್ಗೊಳ್ಳುವುದು ದೂರದ ಮಾತು .
( ಅಂದು ಹಿರಿಯರು ತಮ್ಮ ಕಷ್ಟ-ಕಾರ್ಪಣ್ಯಗಳ ನಡುವೆಯೇ , ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಬ್ಬಗಳನ್ನು ಹೇಗೆ ಆಚರಿಸುತ್ತಿದ್ದರು ? )
ಹಾಗಾದರೇ, ಹದಿನೈದು ವರ್ಷದ ಹಿಂದಿನ ಗುಂಡನಿಗೂ ಈಗಿರುವ ಗುಂಡನಿಗೂ ಬದಲಾವಣೆ ಆಗಿಲ್ಲವೇ ಎಂಬ ನಿಮ್ಮ ಪ್ರಶ್ನೆಗೆ ನನ್ನ ಸರಳ ಉತ್ತರ " ಖಂಡಿತ ... ಬದಲಾಗಿದ್ದಾನೆ". ಆಗ 'ಪುಟಾಣಿ ಗುಂಡ'ನಿಗೆ ಪ್ರತಿಯೊಂದು ಕೆಲಸದಲ್ಲಿಯೂ ಶ್ರದ್ಧೆ ಮತ್ತು ಉತ್ಸುಕತೆ ಇರುತ್ತಿತ್ತು . ಆದರೆ ಈಗಿನ 'ಪದವಿ ಓದುತ್ತಿರುವ ಗುಂಡ'ನಿಗೆ ತನ್ನ ಕೆಲಸಗಳು ಮಾತ್ರ "Cool and Interesting " ಮತ್ತು ಇನ್ನಿತರೇ ಕೆಲಸಗಳು " Quite Boring " ಎಂಬ ಮನಸ್ಥಿತಿಯನ್ನು ತಾಳಿದ್ದಾನೆ. ಸಂಸ್ಕೃತಿ ಉಳಿಸಿ ಸಂಪ್ರದಾಯವನ್ನು ಪಾಲಿಸುವುದು ತನ್ನ ಬೌದ್ಧಿಕ ಬೆಳವಣಿಗೆಗೆ ಅಗೌರವ ಸೂಚಿಸಿದಂತೆ ಎಂಬ ತಪ್ಪು ವಾದಕ್ಕೆ ಅಂಟಿಕೊಂಡಿದ್ದಾನೆ .
ಹಾಗಾಗಿ ಅಂದು ಆತನಿಗೆ ಹಚ್ಚ-ಹಸಿರುಗಳಿಂದ ಕಂಗೊಳಿಸುತ್ತಿದ್ದ ಆ ಮಾವಿನ ಎಲೆಗಳು,ಇಂದು ಕೇವಲ ನಿರ್ಜೀವ ಎಲೆಗಳಾಗಿ ಕಾಣುತ್ತಿವೆ.ಅಂದು ಉತ್ಸುಕತೆಯಿಂದ ಕೂಡಿರುತ್ತಿದ್ದ ಮಂಟಪದ ಕೆಲಸ, ಇಂದು "Some Shit !!" ಎಂದು ಕಡೆಗಣಿಸಿ ಆ ಕೆಲಸವನ್ನೇ ನಿಲ್ಲಿಸಿಬಿಟ್ಟಿದ್ದಾನೆ.ಅಂದು ನೆಂಟರ ನಡುವೆ ಇರುವ ಭಾಂಧವ್ಯತೆಯ ಸಂಕೇತವಾಗಿದ್ದ ಜನ್ಮಾಷ್ಟಮಿಯು , ಇಂದು ಕೇವಲ ಒಂದು ರಜಾ ದಿನಕ್ಕೆ ಸೀಮಿತವಾಗಿದೆ. ಇವತ್ತಿನ ಈ ಗುಂಡನ ಪರಿಸ್ಥಿತಿಗೂ ಆ ಮಳೆಯೇ ಸಾಕ್ಷಿ .ಅಂದು ಗುಂಡನಿಗೆ ಜನ್ಮಾಷ್ಟಮಿಯ ಆ ಮಳೆ ಮುದ ತರಿಸುತ್ತಿತ್ತು . ಆದರೆ ಇಂದು ಅದು " Stupid And Useless Rain " ಆಗಿ ಗೊಚರಿಸುತ್ತಿದೆ .
- ಹೀಗೆ ಗುಂಡನ ಇಂದಿನ ಜನ್ಮಾಷ್ಟಮಿಯು ಸ್ವಾರಸ್ಯವಿಲ್ಲದೇ ಸಾಧಾರಣವಾಗಿ ಸಾಗಿತು .
ಕಡೆಯ ಮಾತು : ಇಲ್ಲಿ "ಗುಂಡೈಯ್ಯಂಗಾರಿ" ಮತ್ತು "ಜನ್ಮಾಷ್ಟಮಿ"( ಕೆಲವು ಕಡೆ ಗೊಕುಲಾಷ್ಟಮಿ ಎಂದು ಬಳಸಿರಬಹುದು) ಎಂಬುದು, ನನ್ನನ್ನೂ ಒಳಗೊಂಡ ಈಗಿನ ಯುವಕ-ಯುವತಿಯರ ಮತ್ತು ಭವ್ಯ ಸಂಸ್ಕೃತಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಅಷ್ಟೆ .ಇದೂ ಯಾರದೇ ವೈಯುಕ್ತಿಕ ವಿಚಾರಗಳಿಗೆ ಸೀಮಿತವಲ್ಲ. ನಮ್ಮ ಕಥಾ ನಾಯಕ ಗುಂಡನ ಕೆಲವು ಗುಣಗಳಾದರೂ ಈಗಿನ ಪ್ರತಿಯೊಬ್ಬ ಯುವಕ-ಯುವತಿಯರಲ್ಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾಣಬಹುದು ಎಂಬುದು ನನ್ನ ಅಭಿಪ್ರಾಯ . ಹೀಗೆ ಈ ದೃಷ್ಟಾಂತದ ಸಾರವನ್ನು ತಿಳಿದ ನಂತರ ನಮ್ಮ ಮನಸ್ಸಿನಲ್ಲಿ , " ಇದೆಲ್ಲವೂ ಗುಂಡನ ( ಗುಂಡ ಈಗಿನ ಆಧುನಿಕ ಯುವಕ-ಯುವತಿಯರನ್ನು ಪ್ರತಿನಿಧಿಸುತ್ತಾನೆ ಎಂಬುದನ್ನು ಮರೆಯಬಾರದು ) ತಪ್ಪೇ ?" ," ಇವೆಲ್ಲಾ ನಮ್ಮ ಆಧುನಿಕ ಯುವಕ-ಯುವತಿಯರ ವಯೋ ಸಹಜ ಧರ್ಮವೇ ಎಂದು ನಿರ್ಲಕ್ಷಿಸಬಹುದೇ ? ಹಾಗೆ ನಿರ್ಲಕ್ಷಿಸಿದರೆ ನಮ್ಮ ಭವ್ಯ ಸಂಸ್ಕೃತಿಗೆ ಬೆಲೆಯೇ ಇಲ್ಲವೇ ? " , " ಗುಂಡನೇ ಮೊದಲಾದ ಯುವಕ-ಯುವತಿಯರ ಜೀವನದಲ್ಲಿ ಹೆಚ್ಚಾದ ತಾಂತ್ರಿಕತೆ ಅವರನ್ನು ಜೀವನದ ಇತರೇ ಆಯಾಮದ ಕಡೆಗೆ ಒಂದು ಗೋಡೆಯನ್ನು ನಿರ್ಮಿಸಿ, ಯಾಂತ್ರಿಕ ಬದುಕನ್ನು ಸಾಗಿಸಲು ಪ್ರೇರೇಪಿಸುತ್ತಿದಿಯೇ ? " ," ಪಾಶ್ಚಾತ್ಯರನ್ನು ಸಂಪೂರ್ಣವಾಗಿ ಅನುಕರಿಸಲು ಹೋಗಿ ನಾವು ದಾರಿ ತಪ್ಪುತ್ತಿದ್ದೇವೆಯೇ ?" , ಅಥವಾ " ಇವೆಲವನ್ನೂ ತಿಳಿದು ALL IZZ WELL ಎಂದು ಸುಮ್ಮನೆ ಕೂರುವುದು ಸಮಂಜಸವೇ ?" - ಇವೇ ಮೊದಲಾದ ಪ್ರಶ್ನೆಗಳು ನಮ್ಮ ಯುವಕ-ಯುವತಿಯರಲ್ಲಿ ಉದ್ಭವಿಸಿ , ಅವರಲ್ಲಿ "ವಿಚಾರ ಕ್ರಾಂತಿ"ಯನ್ನು ಎಬ್ಬಿಸುವಂತಾಗಲಿ ಎಂಬುದೇ ನನ್ನ ಈ ಅಂಕಣದ ಸದುದ್ದೇಶ ....
Nanna 'vinay'apoorvaka namaskaragalu . Naanu ee ' so called ' prajaaprabhutva deshada , bhavya 'bhaaratha'da obba sri saamaanya . Aadaru tamma bali naanu prati-nitya kaanuttiruva , noduttiruva , anubhavasittiruva halavaaru samasyegala bagge , ee patrada moolaka nanna buddhi-shakthi ge anugunavaagi , nanna anisikegalannu hanchikollabeku endu anisitu . Desha-Videshadalli odi bandiruva tammantaha medhavige ee nanna patra kshullaka enisidaru , dayavittu swalpa samaya maadikondu omme kannu haaisi Mr.Singh !!!
"India is the cradle of the human race, the birthplace of human speech, the mother of history, the grandmother of legend, and the great grand mother of tradition. Our most valuable and most astrictive materials in the history of man are treasured up in India only !" endu Americada suprasiddha barahagaara Mark Twain aa kaaladalli 'Bhaaratha'vannu kondaadi barediddare .
Heege Lord Macaulay emba bhoopa , English education shuru maadi namma deshada bennalubu aagidda , puraatana saamskrutika parampareyannu naasha madiddu tamage gotilve Mr.Singh ? So that we Indians became " vehicles for European scientific, historical, and literary expression " . Heege sumaaru 176 varushagalinda naavu namma swantike-yannu bittu avaranne himbalisutta hogta iddivi .......
Intaha paristhithiyalli eegina yuvaka-yuvatiyarige namma bhavya bharateeya samskruti -sampradaayagalu,aachaara -vichaara galu hege gottagutte sir ? Idu eegina yuvaka-yuvatiyara tappo athva namma Education System sari illawo , taavu omme vichaara maadi .....
' Sa vidya ya vimuktaye’ - education is that which has liberation as its aim [ Vishnu Puranam 1.19.41 ] . ' Knowledge must be transformed into wisdom ' - Einstein ...... Namma eegina Exam-Oriented education eshtara mattige idannu paalisuttide ?
' Ishta pattu kali , kashta pattalla ' emba maatide . Aadre eega , primary school inda hididu university gala tanaka , vidye-yannu kalisuva vidhaana , parikshaa paddattigalu , vidyaarthigala manassina mele apaara 'stress' annu untu maaduttide .
Also I happened to read this, " Although schooling is free and compulsory from 6-14 years of age in India , about 35% of world's illiterate population is Indian and, based on historic patterns of literacy growth across the world, India may account for a majority of the world's illiterates by 2020 " . Idakke kaarana enu Mr.PM ?
2> Reservation policy :
Sir , Nanna vaiyukthika abhipraaya " Iruvudu onde jaati , adu maanava jaati " .......
" The framers of the Constitution believed that, due to the caste system, SCs and the STs were historically oppressed and denied respect and equal opportunity in Indian society and were thus under-represented in nation-building activities. The Constitution laid down 15% and 7.5% of vacancies to government aided educational institutes and for jobs in the government/public sector, as reserved quota for the SC and ST candidates respectively for a period of 5 years, after which the situation was to be reviewed. "
Illi gamanisabekaada kelavu amshagalu :
a> Idaranate ee reservation policy embudu 5 varushagalige maatra seemitavagittu . Nantra " Situation was supposed to be reviewed " . Aadre aagidda Congress sarkaara-galu ee policy-yannu renew maduttale bandavu ....... Idanne halavaaru pakshagalu tamma aalvike-ya sandharabhadalli anusarisidavu . Yaavude sarkaara-vu ee policy yannu matte parisheelisalilla . Nimma UPA sarkaara-vu idakke horatalla Mr.Singh. Idakella motive " SC - ST Vote Bank " looti maaduvudu ashte aagittu alwa ?
b>Poor people from "forward castes" do not have any social or economical advantage over rich people from backward caste. In fact , traditionally Brahmins have been poor.
[
Not included in original : Brahmins in India have become a minority. ( 7 minutes video clip which exposes the reality that today's Brahmins have become oppressed and marginalized ...... )
]
Intaha sandarbhadalli Sri Sri Ramanuja ra jeevana charitre-yalli baruva ondu prasangavannu tilisalebeku endu anisuttide .
Ramanuja proceeded to Thirukottiyur to take initiation from Nambi ( one of Guru's of Ramanuja ) for Japa of the sacredMantraof eight lettersOm Namo Narayanaya. Somehow, Nambi was not willing to initiate Ramanuja easily. He made Ramanuja travel all the way from Srirangam to Madurai nearly eighteen times before he made up his mind to initiatehim, and that too, only after exacting solemn promises of secrecy.
Then Nambi duly initiated Ramanuja and said: "Ramanuja! Keep thisMantraa secret. ThisMantrais a powerful one. Those who repeat thisMantrawill attain salvation. Give it only to a worthy disciple previously tried".
But Ramanuja had a very large heart. He was extremely compassionate and his love for humanity was unbounded. He wanted that every man should enjoy the eternal bliss of Lord Narayana. He realised that theMantrawas very powerful. He immediately called all people, irrespective of caste and creed, to assemble before the temple. He stood on top of the tower above the front gate of the temple, and shouted out the sacredMantrato all of them at the top of his voice. Nambi, hisGuru, came to know of this. He became furious. Ramanuja said: "O my beloved Guru! Please prescribe a suitable punishment for my wrong action , I will gladly suffer the tortures of hell myself if millions of people could get salvation by hearing theMantrathrough me". Nambi was very much pleased with Ramanuja and found out that he had a very large heart full of compassion .
amma : Lo magane ..... Naanu ninna amma kano ...... Ninna ee sarcastic compliments gella naanu solodilla ....... Hogi ardha kg carrotu , ardha kg moolangi (raddish) , Ondu kg tomato ....... Haagene 0.5 litreu mosaru packetu togondu baa ........ Hordappa bega .....
bs : Tale baachkondu hogtini ...... Swalpa wait maadi .....
alle idda namma ajji : Ahaaa ....." Vara Pooje"kki Portikro ...... Ange unna pakurttukku ande ponnu varla ...... Begu po ..... Apdiye paadi kg kolkai ( here letter 'i' is silent ) vaankyondu va .....
( Ahaaa .... Vara poojege hortiddane ..... Alle ninnanu nodalu yaava hudugiyu barolla ..... Bega hordu ..... Haagene ardha kg hurulikaai togondu baa )
[
1> Nodi amma kanadalli heltaare ..... ajji tamilnalli heltaare ....... Ondondu sala ella mixaagi , lifenalli bejaan confusion aagutte ..... You will understand this at the "fag end" of the story .......,.
2> Nodi nanna weaknessu ...... yaaradru tellingu " hudugiyarau yaaru barolla " anta ...... naana manassige mattu buddhige besara aagi , tanna kaarya nirvahane yannu nillisi , eradu ( no more .... no less !!! ) nimishagala kaala kanasu kaanutta nintukondubidtini guru .......
]
amma : Duddu ittiddini ..... Togondu hogu .....
bs : Sari , innondu sala heltini nodkoli ........ Ardha kg carrotu , ardha kg moolangi , Ondu kg tomato , ardha kg kolkai ( nodi hurulikaai padane maretu hoitu !!!!! ) , ardha litreu mosaru packetu ........ Righta?
[
BMTC bus nalli jaasti travel maadi elladakku "right .... right " emba pada-ne barutte :D
Ee "shettara angadi" locality nalle tumbaa pamousu ........ Alli neevu ene saamanu - saranjaamu kelidru "illa " anta helakilla aa "shetty sahebaru " :) Beligge 6.30 angadi tegedre , night 11 ge angadi close madodu . Ondondu dina madyahna ootakku angadi close maadolla shetty !!
Aa angadi eshtu pamous andre ........ Hege namma roadnalli hogbekaadre ondu dina ee ajjiyara conversation kelde .......
ajji-1 : Nodri , nam desa eshtu mundvarita ide anta , Nan mommaga emailu-pemailu ( sadya female anlilla !!! ) , poto , pictureu anta elladannu mobile pone nalle nodtaane . Nam kaaladalli el ittu ri ivella ....... Bo khushi aagtaite .....
ajji-2 : Ashtu doora yaake hodri . Naavu mane maadkondu bandaaga , manege saamanu tarabeku andre malleswara - marketu anta ashtu doora hogbekagittu . Ivaga nodi " shettara angadi " yelli duddu swalpa jaasti aadruve , yella sigutte . Ishtu nodine helbahudu namma desha uddhara aagta ide anta ........
ajji-1 : Sariyaagi helidri .....
Alla , namma roadina kelavu ajjiyara paalige , " shetty " angadi ittidde , desha uddhara aagta irodakke saakshi ........ Anyways hats off to "shetty " ....... :)
ps :1> You can imagine ..... 2 aunty's standing in first row ...... 3 aunty's in second row ..... Me at the back as per queue :)
2> Tarakaari angadiyavana hesarannu , innu munde short and sweet aagi "gowda" anta karitini ...... ( In remembrance of the attender " gowda " of CAED lab ....... )
aunty-4 : Dwaaaseee maadidde !!!!! Nan maga dwaaaseee jotege aalugedde (potato) palya madilla andre , inmyaage school ge hogakilla anbutta ri ..... Tumbaaa hatmaari mundedu ...... Adakke madkotte ........
Idannu gamanisuttidda , pakadalli nintidda tata : What young man ? Any problemmmm ?
[
a> As I have already told in my previous article , bereyavaru yaaradru ee taraha oldu , youngu anta maataadidre , nanna "age" maretu hogutte .... Matte "calculate" madlikke shuru maadtini .....Haage matte calculate maadide .... Okie ..... No problem ..... Yes , I am relatively younger anta swalpa khushi aitu ......
b> Enappa ..... Usually ee vayassadavaru nanna hattira kannadalli maataadtaare,aadre ivru englishnalli yaake helidru ?There may be two possibilities .....
1> Ivarige kannada barolla ......
2> Naanu swalpa smart aagi angadige hogidde ....... So, ee english nalli sadaa badkontaaralla , antaha category-yavanu naanu anta ankondu bittra tata ?
bs : ( College hesaru helakku ishta ilde ) Aaaa ....RV College .....
tata : Good ..... I am also an engineer..... I completed my Automobile Engineeringggg from Madras Institute Of Technology long back in sixties ...... Later I worked in Integral Coach Factory for 37 years ........ Now I am enjoying my retired life in Bengaluru ......
Heege paapa , avru tamma bio-data helutta hodru ....... Sumne naanu " Oh ... Nice ..... Okay ..... Great " anta eno kelisikolluva taraha , tale alladisutta act madta-idde .
Adu allade , retired life enjoy maduvudakke " bengalurige " bande - emba maatu keli tumbaa aascharya aitu .........
Last ge , ajji vyaapara mugisi bandru .....
tata : Sorry , I forgot to ask your name .....
naanu nanna hesaru helide .......
bs : Sir , Your good name ..... ?
tata : Subramanya Iyerrr !!!! :)
Ee tatana bio-data keli bejaar aadrunu , Wow ...... Nanna guess correct aitalla !!!!! Tumbaa khushi aitu guru :D
Aa khushi jaasti hottu irodakke ee aunty galu bidlilla ...... Innu aunty-2 vyaapaara maadtaane iddru ...... Maadtaane iddru ......... Adara madhye ......
ps : Author clearly recommends the reader to watch this video completely and then continue with the story , if you want this article to be more effective ......... :)
]
Sumne irokke aagde ......... Aunty -4 : ( Seeing aunty-5 ) Aadruve nimma ee "saree"ge neeli ( blue ) border set aagakilla budi ........ Yaake hasiru ( green ) border-du irlilwa ?
Aunty-5 : Paapa gift aagi kodbekaadre , aa colour beku ....... ee colour beku ....... adu beku - idu beku anta kelokke aagutya ? Neeve yochane maadi ........
Avanu heldashtu duddu kottu ( I am very much weak in bargaining ...... Need to persue a training course from " choukaasi kalaa " aunty !!!! ) tarakaari togondu , bega angadi-inda kalchkonde :)
Adakke helodu ri ...... Ee tarakaari angadidge hogokke nanage ishtave illa ....... :)
bs : Naanu beda-beda anta helidru neeve nanannu kaluhisiddu .......Aa Tarakaari anagadi yalli , ee aunty yaru " Saree bagge , Dwaaaaseee bagge , makkala school bagge, avara bio-data bagge" harate hodeyutta iddare , innu late aadru aascharyavenu illa !!!!
Amma : Mosaru packetu , Ajji helidda hurulikai ella tandiddiya taane ?
( Matte ella conversations nenapige bantu ....... Hahaha .... )
bs : ( With a smiling face ) Yella "bag"nalli madgivni ( ittidini ) ?
Amma : Ah ..... ?
bs : ( pointing to the bag in which I brought the vegetables ) Yella aa "bag"nalli ittidini :)
Swalpa hottadmele ..........
Ootada samayadalli , "Mosaranna"da jotege " Mango Pickles " haaki kondu tinnuvaaga ee kathe baribeku emba idea bantu ............ Never ever underestimate " mosaranna " :P
Nanna kathe odidmele nanna paristhithi , ee haadina roopadalli nimma nenapige barutte , anta nange gottu guru !!! .........
"
Naguvudo ? Aluvudo ? Neeve Heli
Iruvudo ? Biduvudo ? Ee Oorinalli
Ee janara naduve naanu hege baalali ?
Aluvudo ? Naguvudo ? Eega enu maadali ?
:)
"
---------------------------- The End --------------------------
Ee Tarakaari angadi galalli jopaana ....... Hushaaru !!!
Hosa "samaachaara"dondige matte sigona guru .....
Alliyavaregu, namma kadeinda ondu Namaskara :)
PS : 1>This is an exaggerative story based on a real theme and is meant only for fun. 2>Any resemblance of the character names ( other than me :) ) of the story with those who are alive or dead is merely coincidental . 3>Author cant assure the degree of accuracy of many of the factual points discussed in the story . 4>Author is very much grateful to all those who were helpful in writing this article . 5>* -> Conditions apply . :)